Saturday, October 17, 2020

Karnataka Forest Department Posts - 21st Nov


ಕರ್ನಾಟಕ ಲೋಕಸೇವಾ ಆಯೋಗ

ಉದ್ಯೋಗ ಸೌಧ ಬೆಂಗಳೂರು-560 001  

 

ಸಂಖ್ಯೆ: ಪಿಎಸ್ಸಿ 3337 (1)/2020-21                                     ದಿನಾಂಕ: 13-10-2020 

ಅಧಿಸೂಚನೆ


  1. ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು (ನೇಮಕಾತಿ) ನಿಯಮಗಳು 2003 ಮತ್ತು  ಕರ್ನಾಟಕ ಅರಣ್ಯ ಇಲಾಖೆ  ಸೇವೆಗಳು  (ನೇಮಕಾತಿ)  (ತಿದ್ದುಪಡಿ)  ನಿಯಮಗಳು  2012ರನ್ವಯ  ಅರಣ್ಯ,  ಪರಿಸರ ಮತ್ತು  ಜೀವಿಶಾಸ್ತ್ರ ಇಲಾಖೆಯಲ್ಲಿ  ಕೆಳಕಂಡ ಖಾಲಿ ಇರುವ 2019-20 ನೇ ಸಾಲಿನ ಗ್ರೂಪ್-‘ಎ’ ವೃಂದದ  16  ಸಹಾಯಕ  ಅರಣ್ಯ ಸಂರಕ್ಷಣಾಧಿಕಾರಿ  ಹುದ್ದೆಗಳಿಗೆ  ಅಭ್ಯರ್ಥಿಗಳನ್ನು  02   ವರ್ಷಗಳ  ಡಿಪ್ಲೋಮಾ  ಕೋರ್ಸ್  ಇನ್ ಫಾರೆಸ್ಟ್ರಿ ತರಬೇತಿಗಾಗಿ ಆಯ್ಕೆ ಮಾಡಲು ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ  ಅರ್ಹ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು  ಆಹ್ವಾನಿಸಿದೆ :

ಕ್ರಮ ಸಂಖ್ಯೆ

ವಿದ್ಯಾರ್ಹತೆ

ಹುದ್ದೆಗಳ ಸಂಖ್ಯೆ

1

ಬಿ.ಎಸ್ಸಿ (ಅರಣ್ಯ ಶಾಸ್ತ್ರ )ಪದವೀಧರರಿಗೆ

08

2

ಬಿ.ಎಸ್ಸಿ (ಅರಣ್ಯ  ಶಾಸ್ತ್ರ )ಪದವಿ ಹೊರತುಪಡಿಸಿ  ಇತರೆ   ವಿಜ್ಞಾನ/  ಇಂಜಿನಿಯರಿಂಗ್ ಪದವೀಧರರಿಗೆ

08

 

 ಒಟ್ಟು

16


  1. (1)   ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 20-10-2020

       (2)  ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-11 -2020

       (3)  ಪೂರ್ವಭಾವಿ ಪರೀಕ್ಷೆಯ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 21-11 -2020

             ಪೂರ್ವಭಾವಿ ಪರೀಕ್ಷೆಯ  ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು. 


ಪರೀಕ್ಷಾ ಶುಲ್ಕ:-

ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ `.600/-ಗಳನ್ನು ; ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ  `.300/-ಗಳನ್ನು ; ಮಾಜಿ ಸೈನಿಕ ಅಭ್ಯರ್ಥಿಗಳಿಗೆ  `. 50/-ಗಳನ್ನು   ಕಡ್ಡಾಯವಾಗಿ ಪಾವತಿಸತಕ್ಕದ್ದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1  ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ಇದೆ.


ವಿಶೇಷ ಸೂಚನೆ: ರೂ. 35/-ರ ಪ್ರಕ್ರಿಯೆ ಶುಲ್ಕ (processing fees) ವನ್ನು ಎಲ್ಲಾ ಅಭ್ಯರ್ಥಿಗಳು (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವ‍ರ್ಗ-1, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳು ಸೇರಿದಂತೆ)  ಕಡ್ಡಾಯವಾಗಿ ಪಾವತಿಸತಕ್ಕದ್ದು, ಪಾವತಿಸದಿದ್ದಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಗುವುದು.

ವೇತನ ಶ್ರೇಣಿ :- 52650-97100 

 
ಶೈಕ್ಷಣಿಕ ವಿದ್ಯಾರ್ಹತೆ :-

           

                 (1) ಫಾರೆಸ್ಟ್ರಿ ಪದವೀಧರರಿಗಾಗಿ ಮೀಸಲಿರಿಸಿದ ಹುದ್ದೆಗಳಿಗೆ : ಅಭ್ಯರ್ಥಿಗಳು ಫಾರೆಸ್ಟ್ರಿ ವಿಷಯದಲ್ಲಿ ಪದವಿಯಲ್ಲಿ  ಶೇ. 50 ಕ್ಕಿಂತ ಕಡಿಮೆ ಇಲ್ಲದ ಅಂಕ ಪಡೆದು ತೇರ್ಗಡೆ ಆಗಿರಬೇಕು.

                 (2) ಫಾರೆಸ್ಟ್ರಿ  ವಿಷಯವಲ್ಲದ ವಿಜ್ಞಾನ /ಇಂಜಿನಿಯರಿಂಗ್ ಪದವೀಧರರಿಗೆ ಮೀಸಲಾದ ಹುದ್ದೆಗಳಿಗೆ : ಭಾರತದಲ್ಲಿ ಕಾನೂನು   ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದ ಕೃಷಿ ಅಥವಾ                   ತೋಟಗಾರಿಕೆ ಅಥವಾ ಪಶು ವೈದ್ಯ ವಿಜ್ಞಾನ ಪದವಿ ಅಥವಾ ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಬಯೋಕೆಮಿಸ್ಟ್ರಿ,  ಮೈಕ್ರೋ-ಬಯೋಲಜಿ, ಬಯೋಟೆಕ್ನಾಲಜಿ ವಿಷಯಗಳಲ್ಲಿ 02 ಮತ್ತು ಅದಕ್ಕಿಂತ ಹೆಚ್ಚು ವಿಷಯಗಳೊಡನೆ ಪಡೆದ ವಿಜ್ಞಾನ ಪದವಿ ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಇಲ್ಲದ ಅಂಕ ಪಡೆದು ತೇರ್ಗಡೆ ಆಗಿರಬೇಕು ಅಥವಾ ಇಂಜಿನಿಯರಿಂಗ್‍ನ ಯಾವುದೇ ವಿಭಾಗದ ಪದವಿ ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಇಲ್ಲದ ಅಂಕ ಪಡೆದು ತೇರ್ಗಡೆಯಾಗಿರಬೇಕು.


                      (1) For B.Sc. Forestry Graduates: Must be holder of a degree in Bachelor of

                       Science in Forestry from a recognizedUniversity.

                       (2) For Science and Engineering Graduates: Must be holder of Bachelor of Science degree in Agriculture or Horticulture or Veterinary Science or Bachelor of    Science degree with two or more of the following subjects namely, Mathematics,    Physics, Chemistry, Zoology, Botany, Bio-Chemistry, Micro-biology, Bio- Technology or a holder of Bachelor of Engineering degree in any recognized University.

                       (3) The minimum marks obtained in these degree courses shall not be less than fifty percent of the maximum marks.


ಪರೀಕ್ಷಾ ವಿಧಾನ:-

      ಸದರಿ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ಆಫ್ ಲೈನ್-ಓ.ಎಂ.ಆರ್ ಮಾದರಿ (Offline-         OMR type) ಅಥವಾ ಗಣಕಯಂತ್ರದ ಮೂಲಕ ನೇಮಕಾತಿ ಪರೀಕ್ಷೆ  (Computer based Recruitment Test-CBRT) ಮುಖಾಂತರ ನಡೆಸಲಾಗುವುದು. ಗಣಕಯಂತ್ರದ ಮೂಲಕ ನೇಮಕಾತಿ ಪರೀಕ್ಷೆ  (Computer based Recruitment Test-CBRT) ಯನ್ನು ನಡೆಸಲು ಆಯೋಗದ ತೀರ್ಮಾನವಾದಲ್ಲಿ ಅಭ್ಯರ್ಥಿಗಳಿಗೆ ಈ ಸಂಬಂಧ ಸೂಚನೆಗಳನ್ನು ಹಾಗೂ ಅಣಕು ಪರೀಕ್ಷೆಯನ್ನು (Mock Test) ತೆಗೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.


ಪೂರ್ವಭಾವಿ ಪರೀಕ್ಷೆ (Preliminary examination):


ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ (ಬಹು ಆಯ್ಕೆ) ಮಾದರಿಯ ಎರಡು ಪತ್ರಿಕೆಗಳನ್ನು  ಒಳಗೊಂಡಿರುತ್ತದೆ. 


ಪತ್ರಿಕೆ/Paper-1

ಸಾಮಾನ್ಯ ಜ್ಞಾನ/ General Knowledge

100 ಅಂಕಗಳು/  marks

ಪತ್ರಿಕೆ /Paper-2

ಆಪ್ಟಿಟ್ಯೂಡ್ ಟೆಸ್ಟ್ / Aptitude Test

100      ಅಂಕಗಳು/marks

 

ಮುಖ್ಯ ಪರೀಕ್ಷೆ (Main examination ):

ಪತ್ರಿಕೆ /Paper

ಅಂಕಗಳು /Marks

ಕಡ್ಡಾಯ ಪತ್ರಿಕೆಗಳು(ಅರ್ಹತಾದಾಯಕ, ಕನಿಷ್ಠ 35%) /Compulsory Papers(Qualifying, with minimum 35%)  :

ಕನ್ನಡ /Kannada

100

ಇಂಗ್ಲಿಷ್ /English 

100

LaÒPÀ ¥ÀwæPÉUÀ¼ÀÄ/  Optional papers

ಫಾರೆಸ್ಟ್ರಿ ಪತ್ರಿಕೆ-1/ Forestry - Paper I

100

ಫಾರೆಸ್ಟ್ರಿ ಪತ್ರಿಕೆ-2/ Forestry - Paper II

100

ಅಥವಾ ಈ ಕೆಳಕಂಡ ಯಾವುದಾದರೂ ಎರಡು ಪತ್ರಿಕೆಗಳು(100 ಅಂಕಗಳನ್ನೊಳಗೊಂಡ ಪ್ರತಿ ಪತ್ರಿಕೆ)    /or any two papers  out of the following of 100 marks each

(a) ಸಸ್ಯಶಾಸ್ತ್ರ /Botany

(e)

ಭೌತಶಾಸ್ತ್ರ / Physics

(b)ಪ್ರಾಣಿಶಾಸ್ತ್ರ/ Zoology

(f)

ಕೃಷಿ /Agriculture

(c) ಗಣಿತಶಾಸ್ತ್ರ/ Mathematics

(g)

ಸಿವಿಲ್ ಇಂಜಿನಿಯರಿಂಗ್/Civil Engineering

(d) ರಸಾಯನಶಾಸ್ತ್ರ/ Chemistry

 

(h)

ಪಶು ಸಂಗೋಪನೆ ಮತ್ತು ಪಶು ವೈದ್ಯ ವಿಜ್ಞಾನ/ Animal Husbandry & Veterinary Science

ಬಿ. ಎಸ್ಸಿ(ಫಾರೆಸ್ಟ್ರಿ) ಪದವಿದರರಿಗೆ ಮಾತ್ರ  ಫಾರೆಸ್ಟ್ರಿ  ಪತ್ರಿಕೆ-1 ಮತ್ತು 2 ಅನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ./Option to select Forestry Paper I & II is restricted to B.Sc., (Forestry) graduates only.


 
 ವ್ಯಕ್ತಿತ್ವ ಪರೀಕ್ಷೆ: 

  ಪಠ್ಯಕ್ರಮ(Syllabus) ವನ್ನು ಆಯೋಗದ ವೆಬ್ ಸೈಟ್ http://kpsc.kar.nic.in,syllabus ರಲ್ಲಿ ಪ್ರಕಟಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು:

        ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ : 080-30574957/ 30574901

        ಪ್ರಾಂತೀಯ ಕಛೇರಿ ಮೈಸೂರು   : 0821-2545956

              ಪ್ರಾಂತೀಯ ಕಛೇರಿ ಬೆಳಗಾವಿ        :  0831-2475345

              ಪ್ರಾಂತೀಯ ಕಛೇರಿ ಕಲಬುರ್ಗಿ       :  08472-227944

              ಪ್ರಾಂತೀಯ ಕಛೇರಿ ಶಿವಮೊಗ್ಗ      :  08182-228099

              ಸಹಾಯವಾಣಿ ಸಂಖ್ಯೆ               : 18005728707



No comments:

Post a Comment